Alvas Virasat 2015

Alvas Virasat > Press Release > ಜನವರಿ 13ರಿಂದ 15ರವರೆಗೆ ಆಳ್ವಾಸ್ ವಿರಾಸತ್ – 2017

ಜನವರಿ 13ರಿಂದ 15ರವರೆಗೆ ಆಳ್ವಾಸ್ ವಿರಾಸತ್ – 2017

06.12.2016

ಪತ್ರಿಕಾ ಪ್ರಕಟನೆಗಾಗಿ

ಜನವರಿ 13ರಿಂದ 15ರವರೆಗೆ ಆಳ್ವಾಸ್ ವಿರಾಸತ್ 2017

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಮೂಡಬಿದಿರೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’ಆಳ್ವಾಸ್ ವಿರಾಸತ್’. ಈ ವರ್ಷ ಆಳ್ವಾಸ್ ವಿರಾಸತ್‌ಗೆ ೨೩ನೇಯ ವರ್ಷವಾಗಿದ್ದು ಅತ್ಯಂತ ಸಂಭ್ರಮದಿಂದ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಸ್ಕೃತಿ ಪ್ರಿಯರಿಗೆ ಸಾಂಸ್ಕೃತಿಕ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು ’ಆಳ್ವಾಸ್ ವಿರಾಸತ್ ೨೦೧೭’ ಅತ್ಯಂತ ಯಶಸ್ವಿ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ.

’ಆಳ್ವಾಸ್ ವಿರಾಸತ್ 2017’ ಕ್ಕೆ ದಿನಾಂಕ ನಿಗದಿಯಾಗಿದ್ದು ಜನವರಿ 13 ರಂದು ಪ್ರಾರಂಭವಾಗಿ 15ರಂದು ಮುಕ್ತಾಯಗೊಳ್ಳಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರಗಳು ಸೇರಿ ಮೂರು ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ಜರುಗಲಿದೆ. ಎಂದಿನಂತೆ ದಿನವೊಂದಕ್ಕೆ ಎರಡು ಅವಧಿಗಳಿದ್ದು ಪೂರ್ವಾರ್ಧದಲ್ಲಿ ಸಂಗೀತವೂ, ಉತ್ತಾರಾರ್ಧದಲ್ಲಿ ನೃತ್ಯವೂ ಸಂಸ್ಕೃತಿ ಪ್ರಿಯರ ಮನಸ್ಸನ್ನು ಸೂರೆಗೊಳ್ಳಳಿದೆ.

ಪ್ರತಿದಿನ ಮುಸ್ಸಂಜೆ 6.00 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮಗಳು ರಾತ್ರಿ 10.30ಕ್ಕೆ ಮುಕ್ತಾಯಗೊಳ್ಳುತ್ತವೆ. ಜನವರಿ 13ರಂದು ದಿನ ಮಾತ್ರ ಮುಸ್ಸಂಜೆ 5.45ರಿಂದ 6.30ರವರೆಗೆ ಕೇವಲ 45 ನಿಮಿಷಗಳ ಉದ್ಘಾಟನೆಯ ಸಭಾಕಾರ್ಯಕ್ರಮವಿರುತ್ತದೆ. ಉಳಿದಂತೆ ಎಲ್ಲೂ ಸಭಾಕಾರ್ಯಕ್ರಮಗಳಿರುವುದಿಲ್ಲ.

ಕಳೆದ ವರ್ಷದಂತೆ ಈ ವರ್ಷವೂ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗ ಭೂಮಿಯ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ನಡೆಯಲಿದೆ. ಬೃಹತ್ ವೇದಿಕೆಯಿದಾಗಿದ್ದು, 45 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅನುವಾಗುವಂಥಾ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

ಜನವರಿ 13, 14 ಮತ್ತು 15ನೇ ದಿನಾಂಕಗಳಂದು ಮೂರು ದಿನಗಳ ಕಾಲ ನಡೆಯುವ ರಾಷ್ಟೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ೨೦೧೭ಕ್ಕೆ s ಸಂಸ್ಕೃತಿ ಪ್ರಿಯರೂ, ಕಲಾ ಪ್ರೇಮಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವದ ಯಶಸ್ಸಿಗೆ ಸಹಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.

 – ಡಾ| ಎಂ. ಮೋಹನ ಆಳ್ವ