Alvas Virasat 2015

Alvas Virasat > Press Release

Press Release

ಆಳ್ವಾಸ್ ವಿರಾಸತ್ ೨೦೧೮

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆಯು ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’ಆಳ್ವಾಸ್ ವಿರಾಸತ್’ಗೆ ಇದು ೨೪ರ ಹರೆಯ. ಈ ವರ್ಷದ ಆಳ್ವಾಸ್ ವಿರಾಸತ್ ಜನವರಿ ೧೨ರಿಂದ ೧೪ರವರೆಗೆ ಮೂರುದಿನಗಳ ಕಾಲ ಮೂಡುಬಿದಿರೆಯ ಆಳ್ವಾಸ್ ಆವರಣದ ವಿವೇಕಾನಂದ ನಗರ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಜರುಗಲಿದೆ. ಆಳ್ವಾಸ್ ವಿರಾಸತ್ ೨೦೧೮ರ ಉದ್ಘಾಟನೆಗೆ ನಾಗಾಲ್ಯಾಂಡಿನ ರಾಜ್ಯಪಾಲ ಶ್ರೀ ಪಿ.ಬಿ. ಆಚಾರ್ಯ ನಾಗಾಲ್ಯಾಂಡ್ ರಾಜ್ಯದ ರಾಜ್ಯಪಾಲರಾಗಿರುವ ಶ್ರೀ ಪದ್ಮನಾಭ ಬಾಲಕೃಷ್ಣ ಆಚಾರ್ಯರವರು ಪಿ.ಬಿ.ಆಚಾರ್ಯರೆಂದೇ ಪ್ರಸಿದ್ಧರು. ಮೂಲತ: ಉಡುಪಿಯವರಾದ […]

 

Read More

ಆಳ್ವಾಸ್ ವಿರಾಸತ್ ೨೦೧೭

alva-s-virasat-logo-page-001

ಪತ್ರಿಕಾ ಪ್ರಕಟಣೆಗಾಗಿ. ಆಳ್ವಾಸ್ ವಿರಾಸತ್ ೨೦೧೭ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆಯು ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’ಆಳ್ವಾಸ್ ವಿರಾಸತ್’ಗೆ ಇದು ೨೩ರ ಹರೆಯ. ’ಆಳ್ವಾಸ್ ವಿರಾಸತ್ ೨೦೧೭’ ಜನವರಿ ೧೩ರಿಂದ ೧೫ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿದೆ. ದಿನಂಪ್ರತಿ ಮುಸ್ಸಂಜೆ ಪ್ರಾರಂಭವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡು ಅವಧಿಗಳದ್ದಾಗಿದ್ದು ಮೊದಲ ಅವಧಿಯಲ್ಲಿ ವೈವಿಧ್ಯಪೂರ್ಣ ಸಂಗೀತವೂ ಎರಡನೇ ಅವಧಿಯಲ್ಲಿ ವಿವಿಧ ನೃತ್ಯ ಪ್ರಕಾರಗಳು ಇಲ್ಲಿ ಮೇಳೈಸಲಿವೆ. ಆಳ್ವಾಸ್ ವಿರಾಸತ್ ಉತ್ಸವಕ್ಕೆ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ […]

 

Read More

ರೇವ ಶಂಕರ್ ಶರ್ಮ ಅವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ-೨೦೧೭

reva-shankar-sharma

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ವಿರಾಸತ್‌ಗೆ ಪೂರಕವಾಗಿ ಆಳ್ವಾಸ್ ಶಿಲ್ಪ ವಿರಾಸತ್ ಹಾಗೂ ವರ್ಣವಿರಾಸತ್ ರಾಷ್ಟ್ರೀಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿರಿಯ ಚಿತ್ರಕಲಾವಿದರಿಗೆ ಕೊಡಮಾಡುವ ‘ಆಳ್ವಾಸ್ ವರ್ಣವಿರಾಸತ್’ ೨೦೧೭ನೇ ಸಾಲಿನ ಪ್ರಶಸ್ತಿಗೆ ಪ್ರಸಿದ್ಧ ಚಿತ್ರಕಲಾವಿದ ರೇವ ಶಂಕರ್ ಶರ್ಮ ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೇವ ಶಂಕರ್ ಶರ್ಮ ೧೯೩೫ ಅಗಸ್ಟ್ ೬ರಂದು ರಾಜಸ್ಥಾನದ ನತ್ವಾರಾಮ್ ಎಂಬಲಿ ಜನಿಸಿದ ರೇವ ಶಂಕರ್ ಶರ್ಮರವರು […]

 

Read More

ಪದ್ಮಭೂಷಣ ವಿ.ಪಿ. ಧನಂಜಯನ್‌ರವರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ

00001-130-1

ಪತ್ರಿಕಾ ಪ್ರಕಟನೆಗಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆಯು ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’ಆಳ್ವಾಸ್ ವಿರಾಸತ್ ೨೦೧೭’ ಜನವರಿ ೧೩, ೧೪ ಮತ್ತು ೧೫ನೇ ಶುಕ್ರವಾರದಿಂದ ಭಾನುವಾರದವರೆಗೆ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗವೇದಿಕೆಯಲ್ಲಿ ಜರುಗಲಿದೆ. ಜನವರಿ ೧೩ರಂದು ನಡೆಯುವ ಸಭಾಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸುವ ಮೂಲಕ ಈ ವರ್ಷದ ಆಳ್ವಾಸ್ ವಿರಾಸತ್‌ಗೆ ಚಾಲನೆ ನೀಡಲಿದ್ದಾರೆ. ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ […]

 

Read More

ಜನವರಿ 13ರಿಂದ 15ರವರೆಗೆ ಆಳ್ವಾಸ್ ವಿರಾಸತ್ – 2017

06.12.2016 ಪತ್ರಿಕಾ ಪ್ರಕಟನೆಗಾಗಿ ಜನವರಿ 13ರಿಂದ 15ರವರೆಗೆ ಆಳ್ವಾಸ್ ವಿರಾಸತ್ 2017 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಮೂಡಬಿದಿರೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ’ಆಳ್ವಾಸ್ ವಿರಾಸತ್’. ಈ ವರ್ಷ ಆಳ್ವಾಸ್ ವಿರಾಸತ್‌ಗೆ ೨೩ನೇಯ ವರ್ಷವಾಗಿದ್ದು ಅತ್ಯಂತ ಸಂಭ್ರಮದಿಂದ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಸ್ಕೃತಿ ಪ್ರಿಯರಿಗೆ ಸಾಂಸ್ಕೃತಿಕ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು ’ಆಳ್ವಾಸ್ ವಿರಾಸತ್ ೨೦೧೭’ ಅತ್ಯಂತ ಯಶಸ್ವಿ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ’ಆಳ್ವಾಸ್ ವಿರಾಸತ್ 2017’ ಕ್ಕೆ ದಿನಾಂಕ ನಿಗದಿಯಾಗಿದ್ದು […]

 

Read More

ವಿರಾಟ್ ವೇದಿಕೆಯಲ್ಲಿ 22ನೇ ಆಳ್ವಾಸ್ ವಿರಾಸತ್ ಗೆ ವೈಭವದ ಚಾಲನೆ

manasa digital mdb (9)

ಮೂಡುಬಿದಿರೆ: ಕಲೆ ಮತ್ತು ಸಂಸ್ಕøತಿಯ ನಿತ್ಯೋತ್ಸವಕ್ಕೆ ವೇದಿಕೆಯಾಗುತ್ತಿರುವ ಜ್ಞಾನಕಾಶಿ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಾಲ್ಕು ದಿನಗಳ ಕಾಲ ಪುತ್ತಿಗೆಯ ಗ್ರಾಮೀಣ ಪರಿಸರದ ನಿಸರ್ಗ ರಮಣೀಯ ಸೊಬಗಿನ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುವ 22ನೇ ವರ್ಷದ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ “ಆಳ್ವಾಸ್ ವಿರಾಸತ್-2015″ಗೆ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗುರುವಾರ ಸಂಜೆ ಚಾಲನೆಯನ್ನು ನೀಡಿದರು. ನಂತರ ಮಾತನಾಡಿ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಾಂಸ್ಕøತಿಕ […]

 

Read More

ಆಳ್ವಾಸ್ ವಿರಾಸತ್ – 2015

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವರ್ಷಂಪ್ರತಿ ಅತಿ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವ ರಾಷ್ಟ್ರೀಯ ಸಾಂಸ್ಕøತಿಕ ಉತ್ಸವ ‘ಆಳ್ವಾಸ್ ವಿರಾತಸ್’. ಈ ವರ್ಷ ದಶಂಬರ 24ರಿಂದ 27ರ ವರೆಗೆ ‘ಆಳ್ವಾಸ್ ವಿರಾಸತ್ 2015’ ನಡೆಯಲಿದ್ದು ಈಗಾಗಲೇ ಪೂರ್ವತಯಾರಿಗಳೆಲ್ಲವೂ ಮುಗಿದು ಅಂತಿಮ ಕ್ಷಣದ ಸಿದ್ಧತೆ ನಡೆಯುತ್ತಿದೆ. ಆಳ್ವಾಸ್ ಆವರಣ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯು ವಿರಾಸತ್ ಕಾರ್ಯಕ್ರಮಗಳಿಗಾಗಿ ಸಿದ್ಧಗೊಂಡಿದೆ. 35,000 ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅವಕಾಶವಿರುವ ಬೃಹತ್ ಬಯಲುರಂಗ ಮಂದಿರ ಇದಾಗಿದ್ದು ಕಲಾವಿದರು ಮತ್ತು ಪ್ರೇಕ್ಷಕರ […]

 

Read More

ಆಳ್ವಾಸ್ ವರ್ಣ ವಿರಾಸತ್ – 2015

manu_parekh

ಆಳ್ವಾಸ್ ವಿರಾಸತ್ 2015ರ ಅಂಗವಾಗಿ ಮೂಡಬಿದಿರೆ ವಿದ್ಯಾಗಿರಿಯಲ್ಲಿ ಡಿಸೆಂಬರ್ 20 ರಿಂದ 27 ರವರೆಗೆ ಎಂಟು ದಿನಗಳ ರಾಷ್ಟ್ರಮಟ್ಟದ ಆದಿವಾಸಿ ಚಿತ್ರಕಲಾ ಶಿಬಿರ ಹಾಗೂ 23 ರಿಂದ 27ರವರೆಗೆ ಐದು ದಿನಗಳ ಸಮಕಾಲೀನ ಚಿತ್ರಕಲಾ ಶಿಬಿರ ’ಆಳ್ವಾಸ್ ವರ್ಣವಿರಾಸತ್ 2015ನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಯದಲ್ಲಿ ಕಲಾವಿದರೊಂದಿಗೆ ಮುಕ್ತ ಮಾತುಕತೆ ನಡೆಸಲು ಹಾಗೂ ಕಲಾಕೃತಿ ರಚನಾ ಪ್ರಕ್ರಿಯೆಯನ್ನು ಸವಿಯಲು ಸಾರ್ವಜನಿಕರಿಗೆ ಸದಾವಕಾಶವಿರುತ್ತದೆ. ಈ ಶಿಬಿರದಲ್ಲಿ ಬಿಹಾರದಿಂದ ಶ್ರವಣ್ ಕುಮಾರ್ ಪಾಸ್ವಾನ್, ಊರ್ಮಿಳಾ ದೇವಿ, ಮಂಜು ದೇವಿ, ಸುಲೇಖಾ ದೇವಿ, ಕೈಲಾಶ್ ದೇವಿ, ಪವನ್ […]

 

Read More

ಆಳ್ವಾಸ್ ವಿರಾಸತ್ ೨೦೧೫ರ ಪ್ರಶಸ್ತಿಗೆ ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಆಯ್ಕೆ

spb

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹೆಮ್ಮೆಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೇ ತಿಂಗಳ ೨೪ರಿಂದ ೨೭ರವರೆಗೆ ಜರುಗಲಿದೆ. ಆಳ್ವಾಸ್ ಆವರಣದ ಪುತ್ತಿಗೆ ವಿವೇಕಾನಂದನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆ ಇದಕ್ಕಾಗಿ ಸಜ್ಜುಗೊಂಡಿದೆ. ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಪ್ರತಿಭೆಯೊಂದನ್ನು ಗೌರವಿಸುವ ಸನ್ಮಾನ ಕಾರ್ಯಕ್ರಮ ಆಳ್ವಾಸ್ ವಿರಾಸತ್‌ನ ಮೊದಲ ದಿನ ನಡೆಯಲಿದೆ. ಆಳ್ವಾಸ್ ವಿರಾಸತ್ ೨೦೧೫ರ ಈ ಪ್ರಶಸ್ತಿಗೆ ಖ್ಯಾತ ಹಿನ್ನಲೆ ಗಾಯಕರಾದ ಪದ್ಮಶ್ರೀ, ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂರವರನ್ನು ಆಯ್ಕೆ ಮಾಡಲಾಗಿದೆ. ಅಪಾರ ಜನಸ್ತೋಮದ ಮಧ್ಯೆ ಪ್ರಶಸ್ತಿ ಫಲಕದೊಂದಿಗೆ ಒಂದು […]

 

Read More